ವಿವಾದಾತ್ಮಕ CAA ಕಾನೂನು ಜ.10 ರಿಂದಲೇ ಅಧಿಕೃತವಾಗಿ ಜಾರಿಗೊಳಿಸಿದ ಕೇಂದ್ರ ಸರಕಾರ.

0
295

ನವದೆಹಲಿ: ರಾಷ್ಟ್ರಾದ್ಯಂತ ಭಾರೀ ಚರ್ಚೆ ಮತ್ತು ಪ್ರತಿಭಟನೆಗಳಿಗೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ
ತೀವ್ರ ವಿರೋಧದ ನಡುವೆಯೂ ಕೇಂದ್ರ ಸರ್ಕಾರ, ಧರ್ಮದ ಆಧಾರದ ಮೇಲೆ ಪೌರತ್ವ ನೀಡುವ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಶುಕ್ರವಾರದಿಂದ ಅಧಿಕೃತವಾಗಿ ಜಾರಿಗೊಳಿಸಿದೆ.

ಪಾಕಿಸ್ಥಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನಗಳಿಂದ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಂಮೇತರ ವಲಸಿಗರಿಗೆ ಭಾರತೀಯ ಪೌರತ್ವವನ್ನು ನೀಡುವ ಈ ಕಾಯ್ದೆ ಜನವರಿ 10ರಿಂದಲೇ ಜಾರಿಗೆ ಬಂದಿದೆ ಎಂದು ಕೇಂದ್ರ ಗೃಹ ಸಚಿವಾಲಯ ತನ್ನ ಗಜೆಟ್ ಪ್ರಕಟನೆಯಲ್ಲಿ ತಿಳಿಸಿದೆ.

2019 (2019 ರ 47) ಪೌರತ್ವ (ತಿದ್ದುಪಡಿ) ಕಾಯ್ದೆಯ ಸೆಕ್ಷನ್ 1 ರ ಉಪವಿಭಾಗ (2) ರ ಅಧಿಕಾರವನ್ನು ಚಲಾಯಿಸುವಾಗ, ಕೇಂದ್ರ ಸರ್ಕಾರವು 2020 ರ ಜನವರಿ 10ನೇ ದಿನವನ್ನು ಕಾಯ್ದೆ ಜಾರಿಗೆ ಬರುವ ದಿನಾಂಕ ಎಂದು ನಿಗದಿಪಡಿಸಲಾಗಿದೆ. ಈ ದಿನದಂದು ಕಾಯಿದೆಯ ನಿಬಂಧನೆಗಳು ಜಾರಿಗೆ ಬರಲಿವೆ ‘ಎಂದು ಅಧಿಸೂಚನೆ ತಿಳಿಸಿದೆ.

LEAVE A REPLY

Please enter your comment!
Please enter your name here