ಭಾರತ ಬಂದ್‌ಗೆ ಲಿಂಗಸುಗೂರಿನಲ್ಲಿ ನಿರಾಸ ಪ್ರತಿಕ್ರಿಯೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕಾರ್ಮಿಕ ಸಂಘಗಳ ಜಂಟಿ ಸಮಿತಿ ಪ್ರತಿಭಟನೆ

0
218

ಲಿಂಗಸುಗೂರು.ಜ.08- ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಗಳ ಜಂಟಿ ಸಮಿತಿ ಪಟ್ಟಣದಲ್ಲಿಂದು ಬೃಹತ್ ಪ್ರತಿಭಟನೆ ರ‍್ಯಾಲಿ ಮಾಡಿದರು.

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಪ್ರಜಾಪ್ರಭುತ್ವದ ಆಶಗಳಿಗೆ ವಿರುದ್ಧವಾಗಿ ಕಾರ್ಮಿಕರ 44 ಕಾನೂನುಗಳನ್ನು ನಾಶ ಮಾಡಿ ವೃತ್ತಿ ಆರೋಗ್ಯ ಸುರಕ್ಷತೆ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆಗಳನ್ನು ಅಂಗೀಕರಿಸಿದೆ. ಇದರಿಂದಾಗಿ ಸ್ಕಿಂ ಕಾರ್ಮಿಕರಿಗೆ ಕನಿಷ್ಠ ವೇತನ ಹಾಗೂ ಸ್ಥಾನಮಾನ ಇದುವರೆಗೂ ಸಿಕ್ಕಿಲ್ಲ.

ಸಾರ್ವಜನಿಕ ಸಂಸ್ಥೆಗಳಿಂದ ಬಂಡವಾಳ ಹಿಡಿತದಿಂದಾಗಿ ಹಲವಾರು ಸಾರ್ವಜನಿಕ ಸಂಸ್ಥೆಗಳು ಮುಚ್ಚಿಹೋಗಿವೆ. ಬಹುಸಂಖ್ಯಾತ ಜನವಿರೋಧಿ ಎನ್‌ಆರ್‌ಸಿ ದೇಶಾದ್ಯಂತ ವಿಸ್ತರಿಸುವ ಅಪಾಯಕಾರಿ ಯೋಜನೆ ಪ್ರಕಟಿಸಿದೆ.
ಅಕ್ಷರ ದಾಸೋಹ ಬಿಸಿಯೂಟ ನೌಕರರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆರು ರಾಷ್ಟಿçÃಯ ಸಮಾನ ಕನಿಷ್ಠ ವೇತನ 21 ಸಾವಿರ ನಿಗದಿಗೊಳಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡಬೇಕು. ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.

ಬಂದ್‌ಗೆ ನಿರಾಸ ಪ್ರತಿಕ್ರಿಯೆ:
ವಿವಿಧ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್‌ಗೆ ಪಟ್ಟಣದಲ್ಲಿ ನಿರಾಸ ಪ್ರತಿಕ್ರಿಯೆ ವ್ಯಕ್ತವಾಯಿತ್ತು. ಪಟ್ಟಣದಲ್ಲಿ ವ್ಯಾಪಾರ ವಾಹಿವಾಟು ಎಂದಿನಂತೆ ನಡೆದಿತ್ತು. ಶಾಲಾ ಕಾಲೇಜು, ಬ್ಯಾಂಕ್ ಹಾಗೂ ಸರ್ಕಾರಿ ಕಛೇರಿಗಳು ಏಂದಿನಂತೆ ಕಾರ್ಯನಿರ್ವಹಿಸಿದವು. ಬಸ್ ಸಂಚಾರವು ಯಾವುದೇ ತೊಂದರೆಯಾಗದೆ ನಡೆದಿತ್ತು. ಒಟ್ಟಿನಲ್ಲಿ ಲಿಂಗಸುಗೂರುನಲ್ಲಿ ಬಂದ್‌ಗೆ ಯಾವುದೇ ಬೆಂಬಲವಿರಲಿಲ್ಲ.

ಮುಖಂಡರಾದ ಮಹ್ಮದ್ ಅನೀಫ್, ನಾಗರತ್ನ ಸಂತೆಕ್ಕೆಲ್ಲೂರು, ಲಕ್ಷಿ ನಗನೂರು, ಮಹೇಶ್ವರಿ ಹಟ್ಟಿ, ರಮೇಶ ವೀರಾಪೂರು, ವೈ.ಬಸವರಾಜ, ಶರಣಪ್ಪ ಉದ್ಬಾಳ, ಮಲ್ಲೇಶ ಕೋಠಾ, ಮಂಜುನಾಥ, ವೀರಬಸಮ್ಮ, ಮಹಾದೇವಿ, ಬಾಬಾಜಾನಿ, ಹನುಮಂತ, ದಾದಾಪಾಟೇಲ್, ಶಿವರಾಜ, ಮಹ್ಮದ್‌ಸಾಬ ಮಟ್ಟೂರು, ಗುರುಪಾದಪ್ಪ ನಾಯಿಕೋಡಿ, ಹುಸೇನಸಾಬ, ಮಾನಪ್ಪ ಲೆಕ್ಕಿಹಾಳ ಸೇರಿ ಇತರರು ಇದ್ದರು

LEAVE A REPLY

Please enter your comment!
Please enter your name here