ದೇಶದಲ್ಲಿ NRC ಜಾರಿಯಾದರೆ 14 ಕೋಟಿ ಹಿಂದೂಗಳು ವಿದೇಶಿಯರಾಗುತ್ತಾರೆ; ಪ್ರವೀಣ್ ತೊಗಾಡಿಯಾ

0
159

ಮೀರತ್:  ರಾಷ್ಟ್ರೀಯ ನಾಗರಿಕರ ನೋಂದಣಿ NRC ಕುರಿತು  ಪ್ರವೀಣ್ ಭಾಯ್ ತೊಗಾಡಿಯಾ ಧ್ವನಿ ಎತ್ತಿದ್ದಾರೆ.

ಉತ್ತರ ಪ್ರದೇಶದ ಮೀರತ್ ಕ್ಯಾಂಟ್ ನ ಶುಭಮ್ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸ್ಸಾಂ ಎನ್‌ಆರ್‌ಸಿಯಿಂದ 45 ಲಕ್ಷ ಬಾಂಗ್ಲಾದೇಶಿ ಭಾರತೀಯರಾದರೆ 15 ಲಕ್ಷ ಭಾರತೀಯರು ವಿದೇಶಿಯರಾದರು. ಇದೇ ಪ್ರಕ್ರಿಯೆ ದೇಶದಲ್ಲಿ ಜಾರಿಯಾದರೆ 14 ಕೋಟಿ ಹಿಂದೂಗಳು ವಿದೇಶಿಯರಾಗುತ್ತಾರೆ. ,   ಕಾಶ್ಮೀರಿ ಹಿಂದೂಗಳಿಗೆ ಇಲ್ಲಿಯವರೆಗೆ ಏನು ಮಾಡಲಾಗಿದೆ ಎಂದು ಪ್ರಶ್ನಿಸಿದರು

ನರೇಂದ್ರ ಮೋದಿ ಕರ ಸೇವಕ ಅಲ್ಲ. ಅವರು ಎಂದಿಗೂ ಅಯೋಧ್ಯೆ ಹೋಗಲಿಲ್ಲ ಅಥವಾ ಅಭಿಯಾನವನ್ನು ನಡೆಸಲಿಲ್ಲ ಎಂದು ಟೀಕಿಸುವ ಮೂಲಕ ಅವರು ರಾಮ್ ಮಂದಿರ ಹೋರಾಟದಲ್ಲಿ ಮೋದಿ ಮತ್ತು ಷಾ ಅವರಿಗೆ ಯಾವುದೇ ಪಾತ್ರವಿಲ್ಲ ಎಂದು ಹೇಳಿದರು.

ಮುಸ್ಲಿಮರಿಗೆ ಮಾತ್ರ ರಿಜಿಸ್ಟರ್ ಮಾಡುವ ಪ್ರಕ್ರಿಯೆ ನಡೆಯಬೇಕು ಮತ್ತು ಜನಸಂಖ್ಯಾ ನಿಯಂತ್ರಣ ಕಾನೂನು ತರಬೇಕು.

ಕೇಂದ್ರ ಸರಕಾರ ಎಲ್ಸಂಲಾ ರಂಗಗಳಲ್ಲಿ  ವಿಫಲವಾಗಿದೆ ಮೊದಿ ಅಮಿತ್ ಶಾ ಎಚ್ಚೆತ್ತು ಕೊಳ್ಳದಿದ್ದರೆ ಸಮಸ್ಯೆಗಳು ಇನ್ನೂ ಎತ್ತರಕ್ಕೆ ಬೆಳೆಯುತ್ತವೆ. ಇಂದಿನ ಹಿಂಸೆ ಮತ್ತು ಪ್ರತಿಭಟನೆಗಳು ನಿರುದ್ಯೋಗದ ಫಲಿತಾಂಶಗಳಾಗಿವೆ. ಕಾಶ್ಮೀರಿ ಹಿಂದೂಗಳಿಗೆ ಇಲ್ಲಿಯವರೆಗೆ ಮೊದಿ ಸರಕಾರ ಏನೂ ಮಾಡಿಲ್ಲ ಬರೀ ಕನಸು ತೊರಿಸುವ ಮೂಲಕ ಕಾಲ ಕಳೆದಿದೆ. ಮಾತ್ರವಲ್ಲ ಜೆಎನ್ಯು ಹಿಂಸಾಚಾರಕ್ಕೆ ಪೊಲೀಸರು ವಿಫಲರಾಗಿದ್ದಾರೆ  ಎಂದು ಅಭಿಪ್ರಾಯಪಟ್ಟರು.

LEAVE A REPLY

Please enter your comment!
Please enter your name here