ಕೇಂದ್ರ ಸರ್ಕಾರ ಜನ ವಿರೋಧಿ ನೀತಿ ಖಂಡಿಸಿ ಬೃಹತ್ ಪ್ರತಿಭಟನೆ ಮಾನ್ವಿ  ಭಾಗಶಃ ಬಂದ್ 

0
34
ಮಾನ್ವಿ:ಜ.08 ಕೇಂದ್ರ ಸರಕಾರದ ಜನ ವಿರೋಧಿ, ಕಾರ್ಮಿಕ ವಿರೋಧಿ, ರಾಷ್ಟ್ರ ವಿರೋಧಿ ನೀತಿಗಳ ವಿರುದ್ಧ ಕಾರ್ಮಿಕ ಸಂಘಟನೆಗಳ ಜಂಟಿ ಕ್ರೀಯಾ ಸಮಿತಿ ‌ವತಿಯಿಂದ ಬಸವ ವೃತ್ತದಲ್ಲಿ ‌ಬೃಹತ್ ಪ್ರತಿಭಟನೆ ನಡೆಯಿತು. 
 ಭಾರತದ ಭವಿಷ್ಯವು ಪ್ರಸಕ್ತ ಕೇಂದ್ರ ‌ಸರಕಾರದ ಅಡಿಯಲ್ಲಿ ಆತಂಕಕಾರಿ ಹಂತವನ್ನು ತಲುಪಿದೆ ತೀವೃವಾಗುತ್ತಿರುವ ಅರ್ಥಿಕ‌ ಹಿಂಜರಿತ,‌ ಕುಸಿಯುತ್ತಿರುವ ಜಿಡಿಪಿ, ಹೆಚ್ಚುತ್ತಿರುವ ನಿರುದ್ಯೋಗ, ಆದಾಯ ಉತ್ಪನ್ನಗಳಲ್ಲಿ ಇಳಿಮುಖ, ಆಳಗೊಳ್ಳುತ್ತಿರುವ ಬಡತನ, ಮತಹೀನ ಖಾಸಗೀಕರಣ, ರಾಷ್ಟ್ರೀಯ ಸಂಪತ್ತುಗಳ‌ ವಿದೇಶಿಕರಣ, ದೇಶಿಯ, ಕೈಗಾರಿಕಾ ನಾಶ, ಬಡವ ಶ್ರೀಮಂತರ ನಡುವಿನ ಅಸಮಾನತೆಯ ಹೆಚ್ಚಳ,ಕೃಷಿ ಮತ್ತು ಕೃಷಿಕರ ನಾಶ, ತೀವ್ರವಾದ ಗ್ರಾಮಿಣ ಬಿಕ್ಕಟ್ಟು ‌ಹೀಗೆ ಪ್ರತಿಯೊಂದು ಕ್ಷೇತ್ರವು ಅತ್ಯಂತ ‌ಗಂಭೀರ ಪರಿಸ್ಥಿಗೆ ನೂಕಲ್ಪಟ್ಟಿದೆ ಕೇಂದ್ರ ಸರಕಾರ ಇವೆಲ್ಲವನ್ನೂ ಮುಚ್ಚಿ ಹಾಕಲು ಅಂಕಿ ಸಂಖ್ಯೆಗಳನ್ನೆ ತಿರುಚಿ ಹಾಕುತ್ತಿರುವ ಹಾಗೂ ಪೌರತ್ವ ಕಾಯ್ದೆ ಜಾರಿ ಮಾಡಲು ಹೊರಟಿರುವ  ಕೇಂದ್ರ ‌ಸರಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳ ಜಂಟಿ ಕ್ರೀಯಾ ಸಮಿತಿ ‌ವತಿಯಿಂದ ಬಸವ ವೃತ್ತದಲ್ಲಿ ‌ ಪ್ರತಿಭಟನೆ  ಮುಖಾಂತರ ತಹಶೀಲ್ದಾರರಿಗೆ ಮನವಿಪತ್ರ ಕೊಡಲಾಯಿತು.
ಈ ಸಂಧರ್ಭದಲ್ಲಿ ಶರ್ಫುದ್ದೀನ್ ಪೋತ್ನಾಳ್, ಕ್ಕೆ ನಾಗಲಿಂಗಸ್ವಾಮಿ, ಸಿದ್ದರಾಮಯ್ಯ ಸ್ವಾಮಿ,  ‌ನಿತ್ಯಾನಂದ‌ ಕೋನಾಪುರ ಪೇಟೆ, ಚನ್ನಮ್ಮ, ‌ರುದ್ರಪ್ಪ ನಾಯಕ, ಪ್ರದೀಪ್, ಬಸ್ಸಮ್ಮ, ಬಸ್ಸಯ್ಯ ಸ್ವಾಮಿ, ಹುಸೇನ್ ಬಾಷ್, ಶಾಂತ ಸಾಗರ, ದುರೇಂದ್ರ, ದ್ರಾಕ್ಷಯಣಿ, ಸಿದ್ದಲಿಂಗಯ್ಯ, ಚನ್ನಬಸವ, ಚನ್ನಪ್ಪ, ಬಸವರಾಜ ಮೇಸ್ತ್ರಿ, ಅಂಗನವಾಡಿ ಆಶಾ ಕಾರ್ಯಕರ್ತರು ಶೇಕ್ ಫರೀದ್ ಉಮರಿ, ಸೈಯದ್ ಅಕ್ಬರ ಸಾಬ್, ಅಬ್ದುಲ್ ಕರೀಮ್ ಖಾನ್ ಮತ್ತು ಮುಖೀಮ್ ಮತ್ತು ವಿವಿಧ ಸಂಘಟನಾಕಾರರು   ಉಪಸ್ಥಿತರಿದ್ದರು.
ಈ ಪ್ರತಿಭಟನೆಗೆ ನಗರದ ರಾಬಿತೇ ಮಿಲ್ಲತ್ ಮತ್ತು ಜಮಾತೇ ಇಸ್ಲಾಮಿ ಮತ್ತು ವೆಲ್ಫೇರ್ ಪಾರ್ಟಿ ಹಾಗು ಎಫ್ಐಟಿಯು ಬೆಂಬಲ ನೀಡಿದವು
ನಿರಾಶೆ ಪ್ರತಿಕ್ರಿಯೆ :
ಪಟ್ಟಣದ ಮಾನ್ವಿಯಲ್ಲಿ ಅಂಗಡಿ ಮುಂಗಟ್ಟುಗಳು ಬಸ್ ಸಂಚಾರ ವಿವಿಧ ವಾಹನಗಳು ಯಥಾಸ್ಥಿತಿಯಾಗಿ ಕಾರ್ಯನಿರ್ವಹಿಸುತ್ತಿದ್ದರಿಂದ     ಮಾನ್ವಿಯಲ್ಲಿ ಮುಷ್ಕರಕ್ಕೆ ನಿರಾಶೆ ಪ್ರತಿಕ್ರಿಯೆ  ವ್ಯಕ್ತವಾಯಿತು

LEAVE A REPLY

Please enter your comment!
Please enter your name here