ಜೆ ಎನ್ ಯು ವಿದ್ಯಾರ್ಥಿಗಳ ಪ್ರತಿಭಟನೆಗೆ ಸಾಥ್ ನೀಡಿದ ಬಾಲಿವೂಡ್ ನಟಿ ದೀಪಿಕ ಪಡುಕೊನೆ

0
614

ನವದೆಹಲಿ: ಕೇಂದ್ರ ಸರಕಾರದ ವಿರುದ್ಧ ಜವಾಹರ್​ಲಾಲ್​ ನೆಹರು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರೋ ವಿದ್ಯಾರ್ಥಿಗಳ ಪ್ರತಿಭಟನೆಗೆ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಸಾಥ್​ ನೀಡಿದ್ದಾರೆ.

ದೀಪಿಕ ಒಬ್ಬ ನಟಿಯಾಗಿ ಸೀಮಿತವಾಗಿರದೇ ಒಬ್ಬ ಭಾರತೀಯ ಪ್ರಜೆಯಾಗಿ ದೇಶದಲ್ಲಿ ನಡೆಯುತ್ತಿರುವ ಅರಾಜಕತೆಗೆ ಬೇಸತ್ತು ಮೊದಿ,ಶಾ ರ ನೀತಿಗಳ ವಿರುದ್ದ ಧ್ವನಿ ಎತ್ತಲು ಜೆಎವ್ಯು ವಿದ್ಯಾರ್ಥಿಗಳಿಗೆ ಸಾಥ್ ನೀಡಿ ಕೆಲವರ ಕಂಗೆಣ್ಣಿಗೆ ಗೆ ಗುರಿಯಾಗಿದ್ದಾರೆ

ಭಾನುವಾರ ಜವಾಹರ್​ಲಾಲ್​ ನೆಹರು ವಿಶ್ವವಿದ್ಯಾಲಯದ ಕ್ಯಾಂಪಸ್​ನಲ್ಲಿ ನಡೆದ ಹಿಂಸೆಯ ವಿರುದ್ಧ ನಿನ್ನೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಈ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಪರವಾಗಿ ದೀಪಿಕಾ ಭಾಗಿಯಾಗಿದ್ದರು

ವಿಶೇಷವೆಂದರೆ ಕಮ್ಯುನಿಸ್ಟ್ ಪಾರ್ಟಿಯ ನಾಯಕ ಕನ್ಹೈಯ್ಯಾ ಕುಮಾರ್​ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಅವರೊಂದಿಗೆ ದೀಪಿಕಾ ವೇದಿಕೆ ಹಂಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here