ಜೆಎನ್‌ಯು ಹಿಂಸಾಚಾರ ವಾಸ್ತವದಲ್ಲಿ ಫ್ಯಾಸಿಸ್ಟ್ ಸರ್ಜಿಕಲ್ ಸ್ಟ್ರೈಕ್ ; ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

0
26

ಜೆಎನ್‌ಯು ಹಿಂಸಾಚಾರ ತುಂಬಾ ಗೊಂದಲದ ಸಂಗತಿಯಾಗಿದೆ, ಇದು ಪ್ರಜಾಪ್ರಭುತ್ವದ ಮೇಲೆ ನೆಟ್ಟ ಅಪಾಯಕಾರಿ ದಾಳಿಯಾಗಿದೆ. ದಾಳಿಕೋರರ ವಿರುದ್ಧ ಮಾತನಾಡುವವರನ್ನು ಪಾಕಿಸ್ತಾನಿ ಮತ್ತು ದೇಶದ ಶತ್ರು ಎಂದು ಹಣೆಪಟ್ಟಿ ಕಟ್ಟಲಾಗುತ್ತಿದೆ. ಈ ಮೊದಲು ದೇಶದಲ್ಲಿ ಇಂತಹ ಪರಿಸ್ಥಿತಿಯನ್ನು ನಾವು ನೋಡಿಲ್ಲ. ದೆಹಲಿಯ ಪೊಲೀಸರು ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದಲ್ಲಿಲ್ಲ, ಬದಲಿಗೆ ಕೇಂದ್ರ ಸರ್ಕಾರದ ಅಧೀನದಲ್ಲಿದ್ದಾರೆ. ಕೇಂದ್ರವು ಒಂದು ಕಡೆ ಬಿಜೆಪಿ ಗೂಂಡಾಗಳನ್ನು ಕಳುಹಿಸಿದೆ ಮತ್ತು ಇನ್ನೊಂದು ಕಡೆ ಅವರು ಪೊಲೀಸರನ್ನು ನಿಷ್ಕ್ರಿಯಗೊಳಿಸಿದ್ದಾರೆ. ಉನ್ನತ ಪ್ರಾಧಿಕಾರದಿಂದ ನಿರ್ದೇಶಿಸಲ್ಪಟ್ಟರೆ ಪೊಲೀಸರು ಏನು ಮಾಡಬಹುದು. ಹಾಗಾಗಿ ಅವರು ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ್ದಾರೆ ಇದು ಫ್ಯಾಸಿಸ್ಟ್ ಸರ್ಜಿಕಲ್ ಸ್ಟ್ರೈಕ್ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here