ಹೂಗಾರ ಸಮಾಜದಿಂದ ಸಾವಿತ್ರಿಬಾಯಿ ಪುಲೆ ಜನ್ಮದಿನಾಚರಣೆ

0
42

ಲಿಂಗಸುಗೂರು.ಜ.04- ದೇಶದ ಮೊದಲ ಶಿಕ್ಷಕಿ ಅಕ್ಷರದ ಅವ್ವ ಮಾತೆ ಸಾವಿತ್ರಿಬಾಯಿ ಪುಲೆ ಜನ್ಮದಿನಾಚರಣೆಯನ್ನು ತಾಲೂಕು ಹೂಗಾರ ಸಮಾಜ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಖಿಲ ಭಾರತ ಹೂಗಾರ ಸೇನೆವತಿಯಿಂದ ಸರಳವಾಗಿ ಆಚರಣೆ ಮಾಡಲಾಯಿತ್ತು.
ಈ ಸಂದರ್ಭದಲ್ಲಿ ಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಸಮಾಜದ ಅಧ್ಯಕ್ಷ ಮಲ್ಲಪ್ಪ ಹೂಗಾರ, ಮನುವಾದಿಗಳ ಕಿರುಕುಳವನ್ನು ಸಹಿಸಿಕೊಂಡು ಜಾತಿವಾದಿಗಳ ಹಠಹಾಸವನ್ನು ಮೆಟ್ಟಿ ನಿಂತು ಹಿಂದುಳಿದ, ದಲಿತ ಅದರಲ್ಲಿಯೂ ಮಹಿಳೆಯರಿಗೆ ಶಿಕ್ಷಣವನ್ನು ನೀಡಿದರು. ಇವರ ಸೇವೆಯ ಫಲದಿಂದಾಗಿಯೇ ಇಂದು ಮಹಿಳೆಯರು ಶಿಕ್ಷಣ ಪಡೆದು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಇಂತಹ ಶಿಕ್ಷಕಿಯನ್ನು ಪಡೆದ ದೇಶವಾಸಿಗಳಾದ ನಾವು ಭಾಗ್ಯವಂತರು ಎಂದರು.
ಯುವ ಸೇನೆ ಅಧ್ಯಕ್ಷ ನಾಗರಾಜ, ಮಹಾಂತೇಶ ಹೊನ್ನಹಳ್ಳಿ, ಬಸವರಾಜ ಹೊನ್ನಹಳ್ಳಿ, ಮಹಾಂತೇಶ ಕುಮಾರ ಗೆಜ್ಜಲಟ್ಟಾ, ವೀರಭದ್ರಪ್ಪ ಹೂಗಾರ, ಹನುಮಂತ ಗೋನವಾರ, ಮಂಜುನಾಥ ಹುನಕುಂಟಿ, ಶಶಿಗಸ್ತಿ ಸೇರಿ ಇತರರು ಇದ್ದರು.

LEAVE A REPLY

Please enter your comment!
Please enter your name here