ಮಾತೆ ಸಾವಿತ್ರಿ ಬಾಪುಲೆಯವರ ಅದರ್ಶಗಳ ಪಾಲನೆ ಅಗತ್ಯ : ಶಾಸಕ ರಾಜ ವೆಂಕಟಪ್ಪ ನಾಯಕ

0
67

ಮಾನ್ವಿ: ಅಕ್ಷರದಾಸೋಹಿ ಮಾತೆ ಸಾವಿತ್ರಿ ಬಾಪುಲೆಯವರ ತತ್ವ ಅದರ್ಶಗಳನ್ನು ವಿದ್ಯಾರ್ಥಿಗಳು ಪಾಲಿಸಬೇಕು ಎಂದು ಶಾಸಕ ರಾಜ ವೆಂಕಟಪ್ಪ ನಾಯಕ ಹೇಳಿದರು
ಪಟ್ಟಣದ ತಾಲೂಕ ಪಂಚಾಯತಿ ಸಭಾಂಗಣದಲ್ಲಿ ಮಾತೆ ಸಾವಿತ್ರಿ ಬಾಫುಲೆ ಶೈಕ್ಷಣಿಕ, ಸಾಹಿತಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಜಾನೇಕಲ್ ವತಿಯಿಂದ ಸಾವಿತ್ರಿ ಬಾಪುಲೆಯವರ ೧೮೮ ನೇ ಜಯಂತಿ ಕಾರ್ಯಕ್ರಮ ಮತ್ತು ನಿವೃತ್ತಿ ಶಿಕ್ಷಕರಿಗೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಅಯ್ಕೆಯಾದ ಉಪನ್ಯಾಸಕರಿಗೆ ಸನ್ಮಾನ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿದ ಅವರು, ಸಾವಿತ್ರಿ ಬಾಪುಲೆಯವರು ಶೋಷಿತ, ಬಡವರ,ದಲಿತ ಮಹಿಳೆಯರ ಶಿಕ್ಷಣಕ್ಕಾಗಿ ಶ್ರಮಿಸಿದ್ದಾರೆ. ಅವರನ್ನು ಭಾರತದ ಮೊಟ್ಟಮೊದಲ ಮಹಿಳಾ ಶಿಕ್ಷಕಿ ಎಂದು ಗುರುತಿಸುವ ಮೂಲಕ ಮಹಿಳಾ ಶಿಕ್ಷಣ ಕ್ರಾಂತಿಗೆ ನಾಂದಿಯಾಡಿದ್ದಾರೆ. ಆದ್ದರಿಂದ ಇಂದಿನ ವಿದ್ಯಾರ್ಥಿಗಳು ಮಾತೆ ಸಾವಿತ್ರಿ ಬಾಪುಲೆಯವರ ತತ್ವ ಆದರ್ಶಗಳನ್ನು ಪಾಲಿಸುವಂತೆ ತಿಳಿಸಿದರು.

ಸಂಪ್ರದಾಯಿಕ ಕಟ್ಟುಪಾಡು ನೀತಿಗಳನ್ನು ತಿರಸ್ಕರಿಸಿ ಸಾಮಾಜಿಕ ತಳಮಟ್ಟದಲ್ಲಿ ಬದಲಾವಣೆ ತರಬೇಕೆಂದು ಬಯಸಿದ್ದ ಅವರು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಪ್ರಥಮವಾಗಿ ಶಾಲೆಗಳನ್ನು ತೆರೆದರು. ಮಹಿಳಾ ಹಕ್ಕುಗಳಾಗಿ ನಿರಂತರ ಪ್ರತಿಭಟಿಸಿದ್ದಾರೆ. ಇಂತಹ ಮಹನೀಯರ ಅದರ್ಶ ಗುಣಗಳು ಪ್ರತಿಯೊಬ್ಬರಿಗೆ ಮಾದರಿಯಾಗಿವೆ ಎಂದರು.
ಚೀಕಲಪರ್ವಿ ಮಠದ ರುದ್ರಮುನೀಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಹಿಂದಿನ ಕಾಲದಲ್ಲಿ ಶಿಕ್ಷಣದ ಕ್ರಾಂತಿ ಅರಂಭಿಸಿದ ಅವರು ಹಲವಾರು ವಿರೋಧಗಳ ನಡುವೆ ತಳ ಸಮುದಾಯದವರಿಗೆ ಶಿಕ್ಷಣ ನೀಡುವ ಕೆಲಸವನ್ನು ಅರಂಭಿಸಿದ ಮೂದಲ ಮಹಾತಾಯಿ ಅವರು, ಶೋಷಿತರ ಅನಿಷ್ಟ ಪದ್ದತಿಗಳ ಮೆಟ್ಟಿ ನಿಂತು ಮಹಿಳಾ ಕ್ರಾಂತಿಯನ್ನು ನಡೆಸಿದರು ಇಂತವರ ಮಹಾನೀಯರ ಮಾರ್ಗದರ್ಶನದಲ್ಲಿ ಅಳವಡಿಸಿಕೊಂಡು ಶಿಕ್ಷಣದಲ್ಲಿ ಉನ್ನತ ಮಟ್ಟದ ಸಾಧನೆಯನ್ನು ಮಾಡಬೇಕು ಎಂದರು.
ದಲಿತ ಹಿರಿಯ ಮುಖಂಡ ಬಾಲಸ್ವಾಮಿ ಕೊಡ್ಲಿ ಮಾತನಾಡಿ ಹಿಂದಿನ ಕಾಲದಲ್ಲಿ ಸಾವಿತ್ರಿ ಬಾಪುಲೆಯವರು ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕಾದರೆ ಸಮಾಜದಿಂದ ಅನೇಕ ರೀತಿಯ ತೊಂದರೆಗಳನ್ನು ಎದುರಿಸಿದ್ದಾರೆ. ಅತಂಹ ಮಹಾನ್ ಸಾಧಕಿಯು ಅಶ್ಪಶ್ಯತೆ, ಅನಿಷ್ಟ ಪದ್ದತಿ ಹೊಗಲಾಡಿಸಲು ಹಲವಾರು ಹೋರಾಟ ನಡೆಸಿದರು ಮಹನೀಯರ ಹೆಸರಲ್ಲಿ ಟ್ರಸ್ಟ ತೆಗೆದು ಸಾಮಾಜಿಕ ಕಾರ್ಯಗಳನ್ನು ರೂಪಿಸಿರುವುದು ಶಾಘನೀಯ ಎಂದರು.

ಸಿದ್ದಾರ್ಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಿ.ತಿಪ್ಪಣ ಬಾಗಲವಾಡ ವಕೀಲರು, ಶಾರದಾ ಶಿಕ್ಷಣ ಸಂಸ್ಥೆ ಪ್ರಚಾರ್ಯ ತಿಮ್ಮಯ್ಯ ಶೆಟ್ಟಿ ಇಲ್ಲೂರು, ಜೆಡಿಎಸ್ ಮುಖಂಡ, ಪಿ.ರವಿಕುಮಾರ ವಕೀಲರು, ಸಾವಿತ್ರಿ ಬಾಪುಲೆ ಟ್ರಸ್ಟ ಕಾರ್ಯದರ್ಶಿ ಹನುಮಂತ ಜಾನೇಕಲ್ ಮಾತನಾಡಿದರು. ಎಮ್.ಅರ್.ಹೆಚ್,ಎಸ್ ರಾಜ್ಯ ಮುಖಂಡ ಅಂಬಣ್ಣ ಅರೋಲಿಕಾರ್ ವಿಶೇಷ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಸಾವಿತ್ರಿ ಬಾಪುಲೆ ಟ್ರಸ್ಟ ಅಧ್ಯಕ್ಷ ಅರ್ಜುನಪ್ಪ ಜಾನೇಕಲ್, ಉಪಾಧ್ಯಕ್ಷ ಶರಣಬಸವ ನಾಯಕ, ಜೆಡಿಎಸ್ ಮುಖಂಡ ಎಂ.ಡಿ ಇಸ್ಮಾಯಿಲ್, ಮಲ್ಲಪ್ಪ ಹೂಗಾರ್, ಸಂಪನ್ಮೂಲ ವ್ಯಕ್ತಿ ಗಿರಿಧರ್ ಪೂಜಾರಿ, ದಲಿತ ಪ್ಯಾಂಥರ್ ಜಿಲ್ಲಾಧ್ಯಕ್ಷ ಲಕ್ಷö್ಮಣ ಜಾನೇಕಲ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕರಿಗೆ ಹಾಗೂ ಪದವಿ ಪೂರ್ವ ಕಾಲೇಜು ಅಯ್ಕೆಯಾದ ಉಪನ್ಯಾಸಕರಿಗೆ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here