ಬಾಬರಿ ಮಸೀದಿ ಕಟ್ಟಲು ಐದು ಕಡೆ ಜಾಗವನ್ನ ಪರಿಶೀಲಿದ ಉತ್ತರ ಪ್ರದೇಶದ ಯೊಗಿ ಸರಕಾರ.

0
240

ಲಕ್ನೋ: 1992 ರಲ್ಲಿ ಕರಸೇವಕರು ಬಾಬರೀ ಮಸೀದಿಯನ್ನ್ ಕೆಡವಿದ್ದರು ಇದರಿಂದ ದೇಶದಲ್ಲಿ ಭಯಾನಕ ಗಲಭೆಗಳಾಗಿದ್ದವು ಈ ಪ್ರಕರಣ ದೀರ್ಘ ಕಾಲ ಕೊರ್ಟ್ ನಲ್ಲಿತ್ತು ಕಾಲ ಕಾಲದಿಂದ ಜನರು ರಾಮಜನ್ಮಸ್ಥಳ ಮಸೀದಿಯ ಜಾಗವಾಗಿದೆ ಎಂಬ ಕಾರಣ ಬಾಬ್ರಿ ಮಸೀದಿ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಮಾಡಿ, ಮಸೀದಿ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿ ಐದು ಎಕರೆ ಸ್ಥಳ ನೀಡಬೇಕೆಂದು ಸುಪ್ರೀಂಕೋರ್ಟ್ ನವೆಂಬರ್ 9 ರಂದು ನೀಡಿದ ತನ್ನ ಐತಿಹಾಸಿಕ ತೀರ್ಪು ನೀಡಿತ್ತು.

ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಮಸೀದಿ ನಿರ್ಮಾಣ ಮಾಡಲು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರ ಐದು ಸ್ಥಳಗಳನ್ನು ಗುರುತಿಸಿದೆ.

ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಸರಕಾರ ಮಿರ್ಜಾಪುರ, ಶಂಶುದ್ದೀನ್ ಪುರ ಮತ್ತು ಚಾಂದ್ ಪುರದಲ್ಲಿ ಐದು ಸ್ಥಳಗಳನ್ನು ಗುರುತಿಸಿದೆ. ಜೊತೆಗೆ ಸುಪ್ರೀಂ ಆದೇಶದಂತೆ ಸುನ್ನಿ ವಕ್ಫ್ ಬೋರ್ಡ್ ಟ್ರಸ್ಟಿಗಳು ಈ ಸ್ಥಳವನ್ನು ಪರಿಶೀಲಿಸಿ ಮಸೀದಿ ನಿರ್ಮಾಣಕ್ಕೆ ಯಾವ ಸ್ಥಳ ಸೂಕ್ತ ಎಂಬುದನ್ನು ತಿಳಿಸಲು ಉತ್ತರಪ್ರದೇಶ ಸರಕಾರ ಸೂಚನೆ ನೀಡಿದೆ ಎನ್ನಲಾಗಿದೆ.

ಈ ಎಲ್ಲಾ ಜಾಗಗಳು ಪಂಚಕೊಸಿ ಪರಿಕ್ರಾಮದ ಹೊರಗೆ 15 ಕಿ ಮೀ ದೂರದಲ್ಲಿರುವ ಪವಿತ್ರ ಸ್ಥಳಗಳಾಗಿವೆ ಎಂದು ಮೂಲಗಳು ತಿಳಿಸಿವೆ.
ರಾಮಮಂದಿರ ನಿರ್ಮಾಣ ಬೇಕೆಂದು ಸುಪ್ರೀಮ್ ಕೊರ್ಟ್ ಕೊಟ್ಟ ತೀರ್ಪಿನ ವಿರುದ್ಧ ಸುಮಾರು 8 ಮರುಪರಿಶೀಲನಾ ಅರ್ಜಿಗಳು ಹಾಕಲಾಗಿತ್ತು ಆದರೆ ಕೊರ್ಟ್ ಎಲ್ಲಾ ಅರ್ಜಗಳನ್ನ ವಜಾಗೊಳಿತ್ತು.

LEAVE A REPLY

Please enter your comment!
Please enter your name here