ರಾಜ್ಯ ವಿಧಾನ ಸಭೆಯಲ್ಲಿ CAA ವಿರೊಧಿಸಿ ನಿರ್ಣಯ ಅಂಗೀಕರಿಸಿದ ಕೇರಳ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್.

0
168

ತಿರುವನಂತಪುರಮ್ : CAA ವಿವಾದಾತ್ಮಕ ಕಾನೂನು ವಾಪಸ್ ಪಡೆಯುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿ ಕೇರಳ ರಾಜ್ಯದ ವಿಧಾನ ಸಭೆಯಲ್ಲಿ ಇಂದು ಅಂಗೀಕರಿಸಲಾಯಿತು

CAA ವಿರೊಧಿಸಿ ಕೇರಳ CM ಪಿಣರಾಯಿ ವಿಜಯನ್ ರಾಜ್ಯ ವಿಧಾನಸಭೆಯಲ್ಲಿ ಈ ಗ್ಗೆ ನಿರ್ಣಯ ಮಂಡಿಸಿದರು

ವಿರೊಧ ಪಕ್ಷ ಕಾಂಗ್ರೇಸ್ ಮತ್ತು ಸಿಪಿಐ(ಎಮ್) ಪಕ್ಷಗಳು ಈ ನಿರ್ಣಯಕ್ಕೆ ಬೆಂಬಲಿಸಿದವು ಆದರೆ ವಿಧಾನಸಭೆಯ ಏಕೈಕ ಬಿಜೆಪಿ ಸದಸ್ಯ ಓ ರಾಜಗೋಪಾಲ್ ಇದು “ಕಾನೂನುಬಾಹಿರ” ಎಂದು ಹೇಳುವ ಮೂಲಕ ನಿರ್ಣಯವನ್ನು ಆಕ್ಷೇಪಿಸಿದರು.

ನಿರ್ಣಯವನ್ನು ಮಂಡಿಸುವಾಗ, ಸಿಎಎ ದೇಶದ “ಜಾತ್ಯತೀತ” ದೃಷ್ಟಿಕೋನಕ್ಕೆ ವಿರುದ್ಧವಾಗಿದೆ ಮತ್ತು ಪೌರತ್ವ ನೀಡುವಲ್ಲಿ ಧರ್ಮ ಆಧಾರಿತ ತಾರತಮ್ಯಕ್ಕೆ ಕಾರಣವಾಗುತ್ತದೆ ಎಂದು ವಿಜಯನ್‌ ಹೇಳಿದರು. “ಈ ಕಾಯಿದೆಯು ಸಂವಿಧಾನದ ಮೂಲ ಮೌಲ್ಯಗಳು ಮತ್ತು ತತ್ವಗಳಿಗೆ ವಿರುದ್ಧವಾಗಿದೆ. ದೇಶದ ಜನರಲ್ಲಿನ ಆತಂಕವನ್ನು ಗಮನದಲ್ಲಿಟ್ಟುಕೊಂಡು, ಸಿಎಎಯನ್ನು ಕೈಬಿಡಲು ಮತ್ತು ಸಂವಿಧಾನದ ಜಾತ್ಯತೀತ ದೃಷ್ಟಿಕೋನವನ್ನು ಎತ್ತಿಹಿಡಿಯಲು ಕೇಂದ್ರವು ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here