ನಿತ್ಯೊತ್ಸವ ಕವಿ ನಿಸಾರ್ ಅಹಮದ್ ಗೆ ಚಿಕಿತ್ಸೆಗಾಗಿ ಪಾಲಿಕೆ ಸದಸ್ಯರಿಂದ ನೆರವು.

0
568

ಬೆಂಗಳೂರು,ಡಿ.31

ಶ್ವಾಸಕೋಶ ಕಾಯಿಲೆಯಿಂದ ಬಳಲುತ್ತಿರುವ ನಿತ್ಯೋತ್ಸವ ಕವಿ ನಿಸಾರ್ ಅಹಮ್ಮದ್ ಅವರು ಹಲವು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಪುತ್ರ ನಹಮೀದ್ ಕೂಡ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಾಗಾಗಿ ಬಿ ಬಿ ಎಮ್ ಪಿ (ಪಾಲಿಕೆಯ) ಸದಸ್ಯರು ತಮ್ಮ ಒಂದು ತಿಂಗಳ ಗೌರವಧನದ ಮೊತ್ತವನ್ನು ನೀಡುವ ಮೂಲಕ ನಿಸಾರ್ ಅಹಮದ್ ಅವರಿಗೆ ಚಿಕಿತ್ಸಾ ನೆರವು ನೀಡಲು ಮುಂದಾಗಿದ್ದಾರೆ.

ನಿತ್ಯೋತ್ಸವ ಕವಿಗೆ ಒಟ್ಟು 20 ಲಕ್ಷ ರೂ.ಗಳ ಗೌರವಧನ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಮೇಯರ್ ಗೌತಮ್‍ಕುಮಾರ್ ಜೈನ್ ತಿಳಿಸಿದರು.

LEAVE A REPLY

Please enter your comment!
Please enter your name here