ಹಿಂಸಾತ್ಮಕ ಪ್ರತಿಭಟನೆಯಲ್ಲಿ ಜನರನ್ನು ಮುನ್ನಡೆಸುವವರು ನಾಯಕರಲ್ಲ; ಬಿಪಿನ್ ರಾವತ್ ಸೇನಾ ಮುಖ್ಯಸ್ಥ

0
38

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶವ್ಯಾಪಿ ಪ್ರತಿಭಟನೆಗಳು ಹಾಗೂ ಹಿಂಸಾಚಾರ ನಡೆದಿದೆ. ಏತನ್ಮಧ್ಯೆ, ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಹಿಂಸಾತ್ಮಕ ಪ್ರತಿಭಟನೆಯಲ್ಲಿ ಜನರನ್ನು ಮುನ್ನಡೆಸುವವರು ನಾಯಕರಲ್ಲ ಎಂದು ಟೀಕಿಸಿದ್ದಾರೆ.

ದೆಹಲಿ, ಉತ್ತರಪ್ರದೇಶ ಸೇರಿದಂತೆ ದೇಶದ ಹಲವೆಡೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಉತ್ತರ ಪ್ರದೇಶ ಹಾಗೂ ಮಂಗಳೂರಿನಲ್ಲಿ ಹಿಂಸಾಚಾರ ನಡೆದಿತ್ತು. ಈ ಹಿಂಸಾಚಾರಕ್ಕೆ ಬಿಪಿನ್ ರಾವತ್ ವಿರೋಧ ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್ 31 ರಂದು ನಿವೃತ್ತರಾಗಲಿರುವ ಜನರಲ್ ಬಿಪಿನ್ ರಾವತ್ ಅವರು ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಮೊದಲ ಬಾರಿಗೆ ಪೌರತ್ವ ಕಾಯ್ದೆಯ ವಿರುದ್ಧ ರಾಷ್ಟ್ರವ್ಯಾಪಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಯನ್ನು ಖಂಡಿಸುತ್ತಾ ಪ್ರತಿಭಟನೆಗಳ ಕುರಿತು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾಯಕತ್ವ ಮುನ್ನಡೆಸುವವರ ಕೈಯಲ್ಲಿ ಎಲ್ಲವೂ ಇದೆ. ನಾಯಕತ್ವ ನೋಡುವಾಗ ಸರಳವಾಗಿ ಕಂಡರೂ ಅದು ಸಂಕೀರ್ಣವಾಗಿದೆ. ನಾಯಕತ್ವವನ್ನು ಜನರು ಅನುಸರಿಸುತ್ತಾರೆ ಎಂದು ಹೇಳುವ ಮೂಲಕ ವಿರೋಧ ಪಕ್ಷಗಳ ವಿರುದ್ಧ ಅಸಮಾಧಾನ ಹೊರಹಾಕಿದರು.

ಈ ನಡುವೆ ರಾವತ್ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಪರ ಹಾಗೂ ವಿರುದ್ಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಪೌರತ್ವ ಕಾನೂನಿನ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿನ ಹಿಂಸಾಚಾರವನ್ನು ಟೀಕಿಸಿದ್ದಾರೆ, “ಜನಸಾಮಾನ್ಯರನ್ನು ಅಗ್ನಿಸ್ಪರ್ಶ ಮತ್ತು ಹಿಂಸಾಚಾರದಲ್ಲಿ ಮುನ್ನಡೆಸುವವರು ನಾಯಕರಲ್ಲ” ಎಂದು ಅವರು ಹೇಳಿದ್ದಾರೆ.

“ನಾಯಕತ್ವವು ಮುನ್ನಡೆಸುವ ವಿಷಯವಾಗಿದೆ. ನೀವು ಮುಂದುವರಿಯುವಾಗ ಎಲ್ಲರೂ ಅನುಸರಿಸುತ್ತಾರೆ. ಹಾಗಾಗಿ ಅದು ಅಷ್ಟು ಸುಲಭದ ವಿಷಯವಲ್ಲ. ಇದು ಸರಳವಾಗಿ ಕಾಣುತ್ತದೆ, ಆದರೆ ಇದು ತುಂಬಾ ಸಂಕೀರ್ಣವಾದ ವಿದ್ಯಮಾನವಾಗಿದೆ” ಎಂದು ಪರೋಕ್ಷವಾಗಿ ಸಿಎಎ ವಿರುದ್ಧದ ಹೋರಾಟ ಮುನ್ನಡೆಸುವವರಿಗೆ ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here