ಆರ್‌ಎಸ್‌ಎಸ್‌ ಸಂಘದ ಪ್ರಧಾನ ಮಂತ್ರಿ ಭಾರತಮಾತೆಗೆ ಸುಳ್ಳು ಹೇಳುತ್ತಿದ್ದಾರೆ; ರಾಹುಲ್ ಗಾಂಧಿ

0
54

“ಆರ್‌ಎಸ್‌ಎಸ್‌ ಸಂಘದ ಪ್ರಧಾನ ಮಂತ್ರಿ ಭಾರತಮಾತೆಗೆ ಸುಳ್ಳು ಹೇಳುತ್ತಿದ್ದಾರೆ” ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ #JhootJhootJhoot (ಸುಳ್ಳು, ಸುಳ್ಳು, ಸುಳ್ಳು) ಎಂಬ ಹ್ಯಾಶ್‌ಟ್ಯಾಗ್ ಕೂಡ ಸೇರಿಸಿದ್ದಾರೆ.

ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಭಾನುವಾರ ಪ್ರಧಾನಿ ಮೋದಿಯವರ ಭಾಷಣದ ವಿಡಿಯೋ ಕ್ಲಿಪ್ ಮತ್ತು ಅಸ್ಸಾಂನಲ್ಲಿ ಕಟ್ಟಲ್ಪಡುತ್ತಿರುವ ಬಂಧನ ಕೇಂದ್ರದ ವಿಡಿಯೋವನ್ನು ರಾಹುಲ್‌ ಗಾಂಧಿ ಟ್ವೀಟ್‌ನೊಂದಿಗೆ ಹಂಚಿಕೊಂಡಿದ್ದಾರೆ. ಆ ಮೂಲಕ ಒಂದು ಕಡೆ ಬಂಧನ ಕೇಂದ್ರ ಕಟ್ಟುತ್ತಿದ್ದರೂ ನರೇಂದ್ರ ಮೋದಿಯವರು ಇಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ರಾಹುಲ್‌ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಯಾವುದೇ ಬಂಧನ ಕೇಂದ್ರಗಳಿಲ್ಲ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಯನ್ನು ರಾಷ್ಟ್ರವ್ಯಾಪಿ ಜಾರಿ ಮಾಡುತ್ತಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗಳನ್ನು ಖಂಡಿಸಿ ರಾಹುಲ್‌ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

LEAVE A REPLY

Please enter your comment!
Please enter your name here