ನಂಬರ್ ಪ್ಲೇಟ್ ಗಳ ಮೇಲೆ ಹೆಸರಿದ್ದರೆ ಇನ್ಮುಂದೆ ದಂಡ; ಸಾರಿಗೆ ಇಲಾಖೆ ಆಯುಕ್ತ ಶಿವಕುಮಾರ್‌ ಎಚ್ಚರಿಕೆ

0
51

ಬೆಂಗಳೂರು :  ವಾಹನದ ನಂಬರ್ ಪ್ಲೇಟ್ ಗಳ ಮೇಲೆ ಹೆಸರಿದ್ದರೆ ಇನ್ಮುಂದೆ ದಂಡ ಹಾಕಲಾಗುವುದೆಂದು ಸಾರಿಗೆ ಇಲಾಖೆ ಹೇಳಿದೆ .

ವಾಹನಗಳ ನಂಬರ್ ಪ್ಲೇಟ್ ಮೇಲೆ ದೇವರು, ಚಲನಚಿತ್ರ ನಟರ ಚಿತ್ರ, ಚಿಹ್ನೆಗಳನ್ನು  ಹಾಕಿಸಿಕೊಂಡು ರಸ್ತೆಗಳಲ್ಲಿ ವಾಹನ ಸವಾರಿ ಮಾಡಿದರೆ ಇನ್ಮುಂದೆ ದಂಡ ಹಾಕುವಂತೆ ರಾಜ್ಯ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

ಬೆಂಗಳೂರಿನ ಶಾಂತಿನಗರದಲ್ಲಿನ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ  ಸಾರಿಗೆ ಇಲಾಖೆ ಆಯುಕ್ತ ಶಿವಕುಮಾರ್‌ ಎಚ್ಚರಿಕೆ ನೀಡಿದರು

 

ಅವರು ಮಾತನಾಡುತ್ತಾ …ನಿಯಮಗಳ ಪ್ರಕಾರವೇ ನೋಂದಣಿ ಫಲಕಗಳಲ್ಲಿನಿಗದಿತ ಅಳತೆಯ ಅಕ್ಷರಗಳು ಮತ್ತು ಅಂಕಿಗಳನ್ನು ಬರೆಸುವುದು ಕಡ್ಡಾಯವಾಗಿದೆ  ಆದರೆ ಕೆಲವರು ಹೆಸರು, ಚಿಹ್ನೆಗಳನ್ನು ಹಾಕಿಸುತ್ತಾರೆ ಇದು ಅಪರಾಧವಾಗಿದೆ ಎಂದು ಹೇಳಿದರು.

ಅನಧಿಕೃತ ನಂಬರ್‌ ಪ್ಲೇಟ್‌ಗಳ ತೆರವು ಕಾರ್ಯಾಚರಣೆಗೆ ಹೈಕೋರ್ಟ್‌ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಒಂದು ವೇಳೆ ಈ ತರಹದ ನಂಬರ್ ಪ್ಲೇಟ್ ಮೇಲೆ ಹೆಸರು, ಚಿಹ್ನೆ ಇದ್ದರೆ ತಕ್ಷಣ ಅದನ್ನು ತೆರವುಗೊಳಿಸಬೇಕು

ನಂಬರ್ ಪ್ಲೇಟ್ ಗಳ ಮೇಲಿರುವ ಇತರೇ ವಿಷಯಗಳನ್ನ ತೆರವುಗೊಳಿಸಲು ಡಿಸೆಂಬರ್ 21 ರಿಂದ ಮುಂದಿನ 7 ದಿನಗಳ ಗಡುವು ಇರುತ್ತದೆ.

ಗಡುವು ಪೂರ್ಣವಾದ ಬಳಿಕ ವಾಹನಗಳ ನಂಬರ್ ಪ್ಲೇಟ್ ಮೇಲೆ ಹೆಸರು, ಚಿಹ್ನೆ ಕಂಡು ಬಂದರೆ ಕೇಂದ್ರ ಮೋಟಾರು ವಾಹನಗಳ ನಿಯಮದಡಿ ಉಲ್ಲಂಘನೆ ಕೇಸು ದಾಖಲಿಸಿ ದಂಡ ಹಾಕಲಾಗುತ್ತದೆ.

LEAVE A REPLY

Please enter your comment!
Please enter your name here