ಪ್ರಾಣಾಪಾಯದಿಂದ ಪಾರಾದ ಕಲ್ಬುರ್ಗಿ ಗ್ರಾಮೀಣ ಶಾಸಕ

0
25

ವಿಜಯಪುರ:
ಆಲಮಟ್ಟಿಯಲ್ಲಿ ಬೆಳಿಗ್ಗೆ ಆಯೋಜಿಸಿದ್ದ ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ
ಸಭೆಯಲ್ಲಿ ಪಾಲ್ಗೊಳ್ಳಲು ಕಲಬುರ್ಗಿಯಿಂದ ಆಲಮಟ್ಟಿಗೆ ಹೊರಡುವ ಸಂದರ್ಭದಲ್ಲಿ ನಿಡಗುಂದಿ ತಾಲ್ಲೂಕು ಗೊಳಸಂಗಿ ಬಳಿಯ ರಾಷ್ಟ್ರೀಯ ಹೆದ್ದಾರಿ-50ರಲ್ಲಿ

ಕಲಬುರ್ಗಿ ಗ್ರಾಮೀಣಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಬೇರೊಂದು ಕಾರು ಡಿಕ್ಕಿ ಹೊಡೆದ ಕಾರಣ ಶಾಸಕರ ಕಾರು ಅಪಘಾತಕ್ಕೀಡಾಗಿದೆ ಆದರೂ ಪ್ರಾಣಾಪಾಯದಿಂದ ಶಾಸಕರು ಪಾರಾಗಿದ್ದಾರೆ. ಸುದ್ದಿ ತಿಳಿದ ತಕ್ಷಣ ಪೊಲೀಸರು ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕಾರಣವೇನು: ಕಾರಿಗೆ ಆಕಸ್ಮಿಕವಾಗಿ ಅಡ್ಡ ಬಂದ ಬೈಕ್ ಸವಾರನನ್ನು ತಪ್ಪಿಸಲು ಚಾಲಕ ದಿಢೀರ್ ಬ್ರೇಕ್ ಹಾಕಿದ್ದಾನೆ. ಹೀಗಾಗಿ, ಹಿಂಬದಿಯಿಂದ ಬಂದ ಕಾರು ಶಾಸಕರ ಕಾರಿಗೆ ಡಿಕ್ಕಿ ಹೊಡೆದಿದೆ.

ಕಾರಿನ ಹಿಂದಿನ ಭಾಗಕ್ಕೆ ನಷ್ಟ ವಾಗಿದೆ ವಿನಹ ಯಾವುದೇ ಅವಘಡ ಅಪಾಯ ವಾಗಿಲ್ಲವೆಂದು ಪೊಲೀಸ್ ಠಾಣೆಯ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here