ಮೂಲಭೂತ ಸೌಲಭ್ಯ ವದಗಿಸುವಲ್ಲಿ ರಾಯಚೂರು ನಗರಸಭೆ ವಿಫಲ; ಧರಣಿ ಮತ್ತು ಬಂದ್ ಆಚರಣೆಯ ಎಚ್ಚರಿಕೆ

0
52

ರಾಯಚೂರು ನಗರಕ್ಕೆ ಮೂಲಭೂತ ಸೌಕರ್ಯ ಒದಗಿಸಲು ವಿಫಲವಾಗಿರುವ ನಗರಸಭೆ ಆಡಳಿತ ವಿರುದ್ಧ ರಾಯಚೂರು ಉಳಿಸಿ ಹೋರಾಟ ಸಮಿತಿ ಪ್ರತಿಭಟನೆ ನಡೆಸಿ, 15 ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೇ, ರಾಯಚೂರು ಬಂದ್ ಆಚರಿಸಲಾಗುವುದೆಂದು ಎಚ್ಚರಿಕೆ ನೀಡಿದೆ.
ನಗರದ ಸಮಸ್ಯೆಗಳ ಬಗ್ಗೆ ನಗರಸಭೆ ಮತ್ತು ಜಿಲ್ಲಾಡಳಿತಕ್ಕೆ ಪದೇ ಪದೇ ಗಮನಕ್ಕೆ ತಂದರೂ, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹದಗೆಟ್ಟ ರಸ್ತೆಗಳು, ಬೀದಿ ದೀಪಗಳು, ಟಿಪ್ಪು ಸುಲ್ತಾನ್ ರಸ್ತೆ, ಅಶೋಕ ಡಿಪೋ, ಮೋಚಿವಾಡ, ಕೇಂದ್ರೀಯ ವಿದ್ಯಾಲಯ, ವಾಸವಿ ನಗರ ರಸ್ತೆ ಹೀಗೆ ಇತ್ಯಾದಿ ರಸ್ತೆಗಳಲ್ಲಿ ದಿನ ನಿತ್ಯ ಸಾವಿರಾರು ಸಂಖ್ಯೆಯ ಜನ ಓಡಾಡುತ್ತಾರೆ ರಸ್ತೆಗಳ ಮಧ್ಯೆ ಗುಂಡಿಗಳು ಬಾಯಿತೆರೆದು ಕೊಂಡಿವೆ ರಸ್ತೆ ಗಳು ಸಂಪೂರ್ಣ ಹಾಳಾಗಿವೆ ನಗರಸಭೆ ಇದರ ದುರಸ್ತಿಗಾಗಿ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ತೀವ್ರವಾಗಿ ಖಂಡಿಸಲಾಯಿತು. ಕಸ ವಿಲೇವಾರಿ ಕಾರ್ಯ ಪರಿಣಾಮಕಾರಿಯಾಗಿ ಕೈಗೊಳ್ಳುತ್ತಿಲ್ಲ. 24×7 ಕುಡಿವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಂಡಿದ್ದರೂ, ನೀರು ಪೂರೈಕೆಯಾಗುತ್ತಿಲ್ಲ.
ಯುಜಿಡಿ ಕಾಮಗಾರಿ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಹೀಗೆ ಹತ್ತಾರು ಸಮಸ್ಯೆಗಳಿಂದ ನಗರ ತೊಂದರೆಗೆ ಗುರಿಯಾಗಿದೆ. ವಿದ್ಯುತ್ ಸಮಸ್ಯೆಯೂ ಗಂಭೀರವಾಗಿದೆ. ಪದೇ ಪದೇ ಸಂಘ-ಸಂಸ್ಥೆಗಳು ಈ ಸಮಸ್ಯೆ ಈಡೇರಿಕೆಗೆ ಒತ್ತಾಯಿಸಿದರೂ, ಯಾವುದೇ ಉಪಯೋಗವಾಗಿಲ್ಲ ಕಾರಣ 15 ದಿನಗಳಲ್ಲಿ ನಗರಸಭೆ ಮತ್ತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದರೇ ರಾಯಚೂರು ಬಂದ್ ಆಚರಿಸುವ ಪ್ರತಿಭಟಿಸಬೇಕಾಗುತ್ತದೆಂದು ಎಚ್ಚರಿಸಲಾಗಿದೆ.

ಈ ಧರಣಿಯಲ್ಲಿ ಡಾ.ರಜಾಕ್ ಉಸ್ತಾದ್, ಅಶೋಕ ಜೈನ್, ಶಿವಕುಮಾರ, ವೀರೇಶ, ಕೆ.ಈ.ಕುಮಾರ, ಅಬ್ದುಲ್ ಹೈ ಫಿರೋಜ್, ಮಹ್ಮದ್ ರಫೀ, ವಿಶ್ವನಾಥ ಪಟ್ಟಿ, ಜನಾರ್ಧನ ಜಾಲಿಬೆಂಚಿ, ಬಸವರಾಜ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here