ನಾನು ಆರೋಗ್ಯವಾಗಿದ್ದೇನೆ, ಯಾರೂ ಆತಂಕಪಡುವ ಅಗತ್ಯ ಇಲ್ಲ.

0
222

ನಾನು ಆರೋಗ್ಯವಾಗಿದ್ದೇನೆ, ಯಾರೂ ಆತಂಕಪಡುವ ಅಗತ್ಯ ಇಲ್ಲ. ಇನ್ನೂ ಎರಡು ದಿನ ಆಸ್ಪತ್ರೆಯಲ್ಲೇ ವಿಶ್ರಾಂತಿಯಲ್ಲಿದ್ದು ಮನೆಗೆ ಮರಳುತ್ತೇನೆ. ನನ್ನ ಆರೋಗ್ಯದ ಬಗ್ಗೆ‌ ಕಾಳಜಿಯಿಂದ ವಿಚಾರಿಸಿ, ಶೀಘ್ರ ಗುಣಮುಖರಾಗಲು ಹಾರೈಸುತ್ತಿರುವವರಿಗೆಲ್ಲ ಕೃತಜ್ಞನಾಗಿದ್ದೇನೆ.

ಹೃದಯದ ಎರಡು ರಕ್ತನಾಳಗಳು ೧೯ ವರ್ಷಗಳ ಹಿಂದೆ ಬ್ಲಾಕ್ ಆಗಿದ್ದ ಕಾರಣ ಸ್ಟಂಟ್ ಹಾಕಿದ್ದರು. ಕ್ರಿಯಾಶೀಲನಾಗಿ ಓಡಾಡುತ್ತಿದ್ದರೂ ಏನೂ ಆಗಿರಲಿಲ್ಲ. ಈಗ ಒಂದು ರಕ್ತ ನಾಳ ಬ್ಲಾಕ್ ಆಗಿರುವುದು ಆಂಜಿಯೋಗ್ರಾಮ್‌ನಲ್ಲಿ ಗೊತ್ತಾಯಿತು, ಅದಕ್ಕಾಗಿ ಆಂಜಿಯೋ ಪ್ಲಾಸ್ಟಿ ಮಾಡಿದ್ದಾರೆ. ಈಗ ಏನೂ ಸಮಸ್ಯೆ ಇಲ್ಲ.
I am completely all right and healthy.
ಊಹಾಪೋಹಗಳಿಗೆ ಕಿವಿಗೊಡಬೇಡಿ.
ಈಗಲೇ ಮನೆಗೆ ಹೋಗಬಹುದು.‌ ಅಲ್ಲಿ‌ ನೋಡಲು ಬರುವ ಜನರ ಸಂಖ್ಯೆ ಜಾಸ್ತಿಯಾಗುತ್ತದೆ. ಹೀಗಾಗಿ ಎರಡು ದಿನ ಇಲ್ಲೇ ಇರುತ್ತೇನೆ. ಸದ್ಯ ಯಾರೂ ಅಸ್ಪತ್ರೆಗೆ ಬರುವುದು ಬೇಡ. ಮನೆಗೆ ಮರಳಿದ ಬಳಿಕ ಬನ್ನಿ.

LEAVE A REPLY

Please enter your comment!
Please enter your name here