ರಾಬಿತ-ಏ-ಮಿಲ್ಲತ್ ಮಾನವಿ ನೇತೃತ್ವದಲ್ಲಿ ಪೌರತ್ವ ತಿದ್ದುಪಡಿ ಮಸೂದೆ CAB ವಿರುದ್ಧ ಪ್ರತಿಭಟನಾ ರ್ಯಾಲಿ ಮತ್ತು ರಾಷ್ಟ್ರಪತಿಗಳಿಗೆ ಮನವಿ ಪತ್ರ.

0
394

ಪೌರತ್ವ ತಿದ್ದುಪಡಿ ಮಸೂದೆ CAB ಮತ್ತು NRC ವಿರುದ್ಧ ಪ್ರತಿಭಟನಾ ರ್ಯಾಲಿ
ರಾಬ್ತಾ-ಏ-ಮಿಲ್ಲತ್‌ ಮಾನವಿ ಮತ್ತು ವಿವಿಧ ಧಾರ್ಮಿಕ ಜಮಾತ್ ಗಳು, ಜಂಟಿಯಾಗಿ ನಗರದ ಈದ್ಗಾ ಶಾದಿಮಹಲ್ ನಿಂದ ತಹಸೀಲ್ ಕಾರ್ಯಾಲಯದ ವರೆಗೆ ಕೇಂದ್ರ ಸರಕಾರದ ವಿರುದ್ಧ ಘೊಷಣೆಗಳನ್ನ ಕೂಗುತ್ತಾ ಬೃಹತ್ ಪ್ರಮಾಣದ ಪ್ರತಿಭಟನಾ ರ್ಯಾಲಿ ನಡೆಸುವ ಮೂಲಕ ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ವಿರುದ್ಧ ರಾಷ್ಟ್ರಪತಿಗಳಿಗೆ ದಂಡಾಧಿಕಾರಿಗಳ ಮುಖಾಂತರ ಮನವಿ ಮತ್ರ ಸಲ್ಲಿಸಲಾಯಿತು.

ಕಾಂಗ್ರೇಸ್ ಪಕ್ಷದ ಮುಖಂಡರುಗಳು, ದಲಿತ ಸಂಘಟನೆಗಳು,CPIML (R) ಪಕ್ಷದ ಮುಖಂಡರು, ಜೆಡಿಎಸ್ ಪಕ್ಷದ ಮುಖಂಡರುಗಳು ವೆಲ್ಫೇರ್ ಪಾರ್ಟಿ ಮುಖಂಡರುಗಳು ಮತ್ತು ಇತರೇ ಸಂಘ ಸಂಸ್ಥೆಗಳು ಈ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸುವುದರ ಮೂಲಕ ಬೆಂಬಲ ಸೂಚಿಸಿದರು.
ಕೇಂದ್ರ ಸರಕಾರ ಈ ಮಸೂದೆಯನ್ನ ಜಾರಿ ಮಾಡುವ ಮೂಲಕ ದೇಶವನ್ನ ವಿಭಜಿಸುವ ಕೆಲಸಕ್ಕೆ ಕೈ ಹಾಕಿದೆ ಮುಸ್ಲಿಮ್ ವಿರೊಧಿ ನೀತಿ ಅನುಸರಿಸುತ್ತಿದೆ ಕೇಂದ್ರ ಸರಕಾರದ ಧೊರಣೆ ಒಂದು ಸಮುದಾಯಕ್ಕೆ ಬೆಣ್ಣೆ ಇನ್ನೊಂದಕ್ಕೆ ಸುಣ್ಣ ಹಚ್ಚುವ ರೀತಿಯಲ್ಲಿದೆ, ಮೊದಿ ಸರಕಾರ ಹಿಟ್ಲರ್ ಸಂಸ್ಕೃತಿಯನ್ನೇ ಮೀರಿಸಿದೆ, ಮೂದಿ ಸರಕಾರ ಬ್ರಿಟೀಷ್ ಸರಕಾರಕ್ಕಿಂತಲೂ ಅಧಿಕ ಕ್ರೂರಿಯಾಗಿದೆ, ಸರಕಾರ ಈ ಮಸೂದೆ ಜಾರಿಮಾಡಿ ಮುಸ್ಲಿಮ್ ಸಮುದಾಯವನ್ನ ಕೊಲ್ಲುವ ಪ್ರಯತ್ನದಲ್ಲಿದೆ,

ಕೊಮುವಾದಿ ಸರಕಾರದ ವಿರುದ್ಧ ಪ್ರತಿಯೊಬ್ಬರೂ ವಿರೊಧಿಸಬೇಕು ಈ ಸರಕಾರ ದೇಶದ ಪ್ರಗತಿಗೆ ಮಾರಕವಾಗಿದೆ ,ತನ್ನ ನ್ಯೂನ್ಯತೆಗಳನ್ನ ಮುಚ್ಚಿಹಾಕಲು ಪದೇ ಪದೇ ಇಂತಹ ವಿಷಯಗಳನ್ನ ತಂದು ಜನರ ಗಮನ ಬೇರೆಡೆಗೆ ಸೆಳೆಯುವ ಕುತಂತ್ರ ಇದಾಗಿದೆ ಅಸ್ಸಾಮ್ ನ NRC ಮೂಲಕ ತಾನು ಮಾಡಿದ ತಪ್ಪಿನಿಂದ ಹೊರಗುಳಿದ 14 ಲಕ್ಷ ಬಂಗಾಳಿ ಹಿಂದೂಗಳನ್ನ ರಕ್ಷಣೆ ಮಾಡುವ ನಿಟ್ಟಿನಲ್ಲಿ ಸಂವಿಧಾನ ವಿರೊಧಿ ಧರ್ಮಾಧಾರಿತ ಮಸೂದೆ ತರುತ್ತಿರುವುದು ಖಂಡನೀಯ ರಾಷ್ಟ್ರಪತಿಗಳು ಅಂಕಿತಹಾಕಬಾರದಿತ್ತು ಆದರೂ ಅವರುಗಳು ಬಿಜೆಪಿಯ ಒತ್ತಡಕ್ಕೆ ಮಣಿದು ಅಂಕಿತ ಹಾಕಿರುವುದು ದುರದುಷ್ಟಕರ ಪ್ರಜಾಪ್ರಭುತ್ವದ ದೇಶ ಭಾರತದಲ್ಲಿ ಸಂವಿಧಾನದ ಮೂಲ ಅಂವಶಗಳಿಗೆ ಧಕ್ಕೆ ತರುವ ಮಸೂದೆ ಇದಾಗಿದೆ ಪ್ರಜಾ ಪ್ರಭತ್ವ ವ್ಯವಸ್ಥೆಯನ್ನ ಮುಗಿಸಿ ಹಿಂದುತ್ವವನ್ನ ಜಾರಿಗೆ ತರುವ ದುಷ್ಟ ಯೊಚನೆ ಸರಕಾರದ್ದಾಗಿದೆ

ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಧರ್ಮದ ಆಧಾರದಲ್ಲಿ ಪೌರತ್ವ ಮಸೂದೆ ಜಾರಿಯಾಗಿರುವುದು ನಮ್ಮೆಲ್ಲರ ಪಾಲಿಗೆ ಕರಾಳ ದಿನವಾಗಿದೆ ಕಾರಣ ಇದು ಖಂಡನೀಯವಾಗಿದೆ ಪೌರತ್ವ ಮಸೂದೆ ತಿದ್ದುಪಡಿಯ ಹೆಸರಿನಲ್ಲಿ ಈ ದೇಶದಲ್ಲಿರುವ ಮುಸಲ್ಮಾನರಿಗೆ ದೇಶದ ಹೊರಗೆ ಅಟ್ಟುವ ಉದ್ದೇಶ ಇವರದ್ದಾಗಿದೆ ಕಾರಣ ಇಂತಹ ಸಂವಿಧಾನ ವಿರೊಧಿ ಮಸೂದೆ ಜಾರಿಯಾಗದಿರಲಿ ಕೇಂದ್ರ ಸರಕಾರ ಈ ಮಸೂದೆಯನ್ನ ರದ್ದುಮಾಡಬೇಕೆಂದು ಆಗ್ರಹಿಸುತ್ತೇವೆ ಅಕಸ್ಮಾತಾಗಿ ರದ್ದುಮಾಡದಿದ್ದರೆ ವಿವಿಧ ರಾಜಕೀಯ ಪಕ್ಷಗಳು, ವಿವಿಧ ಧರ್ಮೀಯರು,ಬುದ್ಧಿಜೀವಿಗಳು ಎಲ್ಲರೂ ಜಂಟಿಯಾಗಿ ಈ ಮಸೂದೆ ತಿದ್ದುಪಡಿಯ ವಿರುದ್ಧ ಸಂವಿಧಾನದ ಉಳುವಿಗಾಗಿ ಧ್ವನಿ ಎತ್ತಲು ಬ್ರಿಟಿಷರ ವಿರುದ್ಧ ಹೊರಾಡಿದಂತೆ ಮತ್ತೊಂದು ಬೃಹತ್ ಪ್ರಮಾಣದ ಚಳುವಳಿ ಪ್ರಾರಂಭ ಮಾಡಲಾಗುವುದೆಂದು ರ್ಯಾಲಿಯಲ್ಲಿ ಭಾಗವಹಿಸಿದ ವಿವಿಧ ಮುಖಂಡರುಗಳು ಒಮ್ಮತದಿಂದ ಆಕ್ರೊಷ ವ್ಯಕ್ತ ಪಡಿಸಿದರು.ವಿಶೇಷವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ!! ಬಸವಪ್ರಭು, ದಲಿತ ನಾಯಕ, ಕಾಂಗ್ರೇಸ್ ಮುಖಂಡ ಬಾಲಸ್ವಾಮಿ ಕೊಡ್ಲಿ, ಕಾಂಗ್ರೇಸ್ ಮುಖಂಡ ವಸಂತ ನಾಯಕ , ಜೆಡಿಎಸ್ ಮುಖಂಡ ನ್ಯಾಯವಾದಿ ರವಿ ಕುಮಾರ್ , ಕ್ರೈಸ್ತ ಧರ್ಮದ ಫಾದರ್ ಜ್ಞಾನಪ್ರಕಾಶಮ್, ಸಿಪಿಐಏಮೆ ಎಲ್ ನ ನಾಗಲಿಂಗಯ್ಯ ಸ್ವಾಮಿ, ಮೌಲಾನ ಮುಫ್ತಿ ಜೀಶಾನ್ ಹಸನ್, ಮುಖಂಡರಾದ ಸೈಯದ್ ಸಜ್ಜಾದ್ ಹುಸೇನ್ , ಸಾದಿಕ್ ಪಾಶ ಬಾಬುಲ್ ಮತ್ತು ಇತರೇ ಗಣ್ಯರು ಮಾತನಾಡಿದ ನಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಕೊಡಲಾಯಿತು

ರಾಬಿತ-ಏ-ಮಿಲ್ಲತ್ ನ ಅಧ್ಯಕ್ಷ ಸೈಯದ್ ಅಕ್ಬರ್ ಪಾಶ ಸಾಬ್ ಧನ್ಯವಾದಗಳನ್ನ ಅರ್ಪಿಸಿದರೆ ಮೌಲಾನ ಶೇಕ್ ಫರೀದ್ ಉಮರಿ ನಿರೂಪಿಸಿದರು ಆಖಿಲ್ ಜೀಶಾನ್ ಮನವಿ ಪತ್ರವನ್ನ ಓದಿದರು. ಈ ರ್ಯಾಲಿಯಲ್ಲಿ ಮಾಜಿ ಶಾಸಕ ಹಂಪ ನಾಯಕ ಸಾಹುಕಾರ್,ಮೌಲಾನ ಅನ್ವರ್ ಪಾಶ, ಗಫೂರ್ ಸಾಬ್, ನಿಜಾಮ್ ಪಾಶ, ಪುರಸಭೆ ಸದಸ್ಯರಾದ ಹೆಚ್ ಬೀ ಏಮ್ ಹುಸೇನ್ ಬಾಶ, ಸಾಬಿರ್ ಪಾಶ, ಇಬ್ರಾಹೀಮ್ ಬಾಶ, ಇಬ್ರಾಹೀಮ್ ಕುರೇಶಿ, ಮತ್ತು ಇತರೇ ಮುಖಂಡರು ಖಲೀಲ್ ಕುರೇಶಿ, ಸಂಮ್ದಾನಿ ನಾಯಕ್,ಸೈಯದ್ ಇಕ್ಬಾಲ್, ಉಬೇದ್ ಖಾದ್ರಿ, ದಾದ ಸಾಹುಕಾರ, ಶಹಬಾಸ್ ಸಾಹುಕಾರ್, ಜೆ ಚಂದಾಸಾಬ್ ,ಅನ್ವರ್ ಪಾಶ ಉಮರಿ, ಮೌಲಾನ ಸಿಕಂದರ್ ಪಾಶ, ಮೌಲಾನ ಅಬುಲ್ ಆಲ ಉಮರಿ, ಜಾವಿದ್ ಖಾನ್ ,ಹುಸೇನ್ ಬಾಶ ನ್ಯಾಶ್ನಲ್, ಮತ್ತು ಇತರೇ ಮುಖಂಡರುಗಳು ಹಾಗು ರಾಬಿತಯೇ ಮಿಲ್ಲತ್ ವೇದಿಕಯ ಬೆಂಬಲಿಗರು, ಸದಸ್ಯರು ಉಪಸ್ಥಿತರಿದ್ದರು. ಪೊಲೀಸ್ ಇಲಾಖೆಯ ವತಿಯಿಂದ ಉತ್ತಮ ರೀತಿಯಲ್ಲಿ ಬಂದೊಬಸ್ತ್ ಮಾಡಲಾಗಿತ್ತು.

LEAVE A REPLY

Please enter your comment!
Please enter your name here