ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ವಿರೊಧಿಸಿ ಪ್ರತಿಭಟನೆ,ಆಕ್ರೊಶ.

0
276

ರಾಬ್ತಾ-ಏ-ಮಿಲ್ಲತ್‌ ರಾಯಚೂರು ಘಟಕದ ವತಿಯಿಂದ ರಾಯಚೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವ ಮೂಲಕ ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ತರಲು ಮುಂದಾಗಿರುವ ಕೇಂದ್ರ ಸರಕಾರದ ಕ್ರಮವನ್ನ ವಿರೊಧಿಸಲಾಯಿತು.
ಕೇಂದ್ರ ಸರಕಾರ ಈ ಮಸೂದೆಯನ್ನ ಜಾರಿ ಮಾಡುವ ಮೂಲಕ ದೇಶವನ್ನ ವಿಭಜಿಸುವ ಕೆಲಸಕ್ಕೆ ಕೈ ಹಾಕುತ್ತಿದೆ ಈ ಮಸೂದೆ ಜಾರಿಮಾಡಿ ಅಸ್ಸಾಮ್ ನ NRC ಯಿಂದ ಹೊರಗುಳಿದ 14 ಲಕ್ಷ ಬಂಗಾಳಿ ಹಿಂದೂಗಳನ್ನ ರಕ್ಷಣೆ ಮಾಡುವ ಉದ್ದೇಶವಿದೆ ಪ್ರಜಾಪ್ರಭುತ್ವದ ದೇಶ ಭಾರತದಲ್ಲಿ ಸಂವಿಧಾನದ ಮೂಲ ಅಂವಶಗಳ ಮೇಲೆ ದಾಳಿ ಮಾಡುವ ಮೂಲಕ ಇದೇ ಮೊದಲ ಬಾರಿಗೆ ಧರ್ಮದ ಆಧಾರದಲ್ಲಿ ಪೌರತ್ವ ಮಸೂದೆ ಜಾರಿಯಾಗುತ್ತಿದೆ ಇದು ಖಂಡನೀಯ ಪೌರತ್ವ ಮಸೂದೆ ತಿದ್ದುಪಡಿಯ ಹೆಸರಿನಲ್ಲಿ ಈ ದೇಶದಲ್ಲಿರುವ ಮುಸಲ್ಮಾನರಿಗೆ ದೇಶದ ಹೊರಗೆ ಅಟ್ಟುವ ಉದ್ದೇಶ ಇವರದ್ದಾಗಿದೆ ಕಾರಣ ಇಂತಹ ಸಂವಿಧಾನ ವಿರೊಧಿ ಮಸೂದೆ ಜಾರಿಯಾಗದಿರಲಿ ವಿವಿಧ ರಾಜಕೀಯ ಪಕ್ಷಗಳು, ವಿವಿಧ ಧರ್ಮೀಯರು,ಬುದ್ಧಿಜೀವಿಗಳು ಎಲ್ಲರೂ ಒಂದಾಗಿ ಈ ಮಸೂದೆ ತಿದ್ದುಪಡೆಯ ವಿರುದ್ಧ ಸಂವಿಧಾನದ ಉಳುವಿಗಾಗಿ ಧ್ವನಿ ಎತ್ತಬೇಕೆಂದು ವಿನಂತಿಸುತ್ತೇವೆಂದು ರಾಬಿತ-ಏ-ಮಿಲ್ಲತ್ ನ ಸದಸ್ಯರುಗಳು ಒತ್ತಾಯಿಸಿದರು.ಜೊತೆಗೆ ಜಿಲ್ಲಾಧಿಕಾರಿಗಳ ಮೂಲಕ ಪ್ರಾಧಾನಮಂತ್ರಿಗಳಿಗೆ ಮಸೂದೆ ವಿರೊಧಿಸಿ ಮನವಿ ಪತ್ರ ಕೊಡಲಾಯಿತು.

ಈ ಸಂದರ್ರಭದಲ್ಲಿ ರಾಬಿತ-ಏ-ಮಿಲ್ಲತ್ ಸಂಘದ ಅಧ್ಯಕ್ಷ ಮಹ್ಮದ್ ಎಕ್ಬಾಲ್ ಏಮ್ಐಸಿ,ಮುಫ್ತಿ ಕಲಿಮೂದ್ದೀನ್ಸಾಬ್,
ಹೊರಾಟಗಾರರಾದ ರಾಘವೇಂದ್ರ ಕುಷ್ಠಗಿ, ಮೊಹ್ಮದ್ ಅಬ್ದುಲ್ ಶುಕುರ್ ಸಾಬ್, ಮೊಹ್ಮದ್ ನಿಜಾಮುದ್ದಿನ್, ಮೊಹ್ಮದ್ ಹಮೀದ್ ಖಾನ್, , ಅಬ್ದುಲ್ ಲತೀಫ್, ಜಮೀಲ್ ಸಿದ್ದೀಕಿ, ಮೋಹ್ಮದ್ ಅಸೀಮುದ್ದೀನ್, ಇಕ್ಬಾಲ್ ಮನಿಯಾರ, ಉಸ್ಮಾನ್ ಮತ್ತು ಅಸ್ಲಂ ಪಾಶ ಉಪಸ್ದಿತರಿದ್ದರು.

LEAVE A REPLY

Please enter your comment!
Please enter your name here